ದಂತವಕ್ರ -
ಕಳಿಂಗದ ಒಂದು ಭಾಗವಾದ ಕರೂಶ ದೇಶದ ರಾಜ ವೃದ್ಧ ಶರ್ಮ, ವಸುದೇವನ ಸೋದರಿ ಶ್ರುತ ದೇವಿಯರ ಮಗ. ಶಿಶುಪಾಲನ ಮಿತ್ರ. ರಾಜಸೂಯ ಯಾಗಕ್ಕೆ ಪೂರ್ವಾಭಾವಿಯಾಗಿ ಪಾಂಡವರು ನಡೆಸಿದ ದಿಗ್ವಿಜಯ ಯಾತ್ರೆಯಲ್ಲಿ ಸಹದೇವನನ್ನು ಎದುರಿಸಿ ಸೋತುದಲ್ಲದೇ ರಾಜಸೂಯ ಯಾಗದ ಸಮಯದಲ್ಲಿ ಶ್ರೀಕೃಷ್ಣನಿಗೆ ಅಗ್ರಪೂಜೆ ಸಲ್ಲಿಸುವಾಗ, ಶಿಶುಪಾಲ ಕೃಷ್ಣನನ್ನು ದೂಷಿಸಿ ಆತನ ಚಕ್ರಕ್ಕೆ ಆಹುತಿಯಾದುದನ್ನು ತಿಳಿದ ಈತ ಶ್ರೀಕೃಷ್ಣನನ್ನು ಎದುರಿಸಲು ಹೋಗಿ ಆತನ ಕೌಮೋದಕಿಗೆ ಪ್ರಾಣವನ್ನು ಅರ್ಪಿಸಿದ.												

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ